Research Matters
•
17th April 2020
ಕೊರೋನ ಮತ್ತು ಬಾವಲಿಯ ನಂಟು: ಬಾವಲಿಗಳನ್ನು ಹೊರಗಟ್ಟಬೇಕೇ?
ಬಾವಲಿಗಳು ತಮ್ಮ ಪಾಡಿಗೆ ತಾವು ರಾತ್ರಿಯಲ್ಲಿ ಹಾರಾಡುವ ಸಸ್ತನಿಗಳು. ಇವು ಪ್ರಪಂಚದಾದ್ಯಂತ ಹರಡಿದ್ದು, ಇವುಗಳಲ್ಲಿ ಸುಮಾರು ೧೨೦೦ ಪ್ರಭೇದಗಳಿವೆ. ಈಗಿನ ಲಾಕ್ ಡೌನ್ ಗೆ ಕಾರಣವಾಗಿರುವ ಕೋವಿಡ್-೧೯ ಸಾಂಕ್ರಾಮಿಕವನ್ನು ಬಾವಲಿಗಳು ಹರಡುತ್ತಿವೆ ಎಂದು ಜನರು ತಿಳಿದಿದ್ದಾರೆ. ಇದಕ್ಕೆ ಪೂರಕವಾಗಿ, ಕೆಲವೇ ದಿನಗಳ ಹಿಂದೆ, ICMR (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್)ನ ಅಧ್ಯಯನವೊಂದು ದಕ್ಷಿಣ ಭಾರತದಲ್ಲಿ ಕಂಡುಬರುವ ಬಾವಲಿಗಳಲ್ಲಿ “ಬ್ಯಾಟ್-ಕೊರೊನ ವೈರಸ್” ಇದೆ ಎಂಬುದು ಬೆಳಕಿಗೆ ಬಂದಿದೆ. ಇದನ್ನೆಲ್ಲಾ ಓದಿದ ಜನ, ಭಯಭೀತರಾಗಿ ಕೆಲವೆಡೆ ಬಾವಲಿಗಳನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ. ಕೆಲವರಂತೂ ಮನೆ ಅಂಗಳದಲ್ಲಿ